top of page
Kannadizm logo 2 _edited.png

ಕನ್ನಡಿಸಂ ಗೆ ಸ್ವಾಗತ

  ಹೆಮ್ಮೆಯ ಕನ್ನಡ ಇರಲಿ

  ನಮ್ಮಯ ಸಂಗಡ ಬರಲಿ

`ಕನ್ನಡಿಸಂ’ ಅಂದರೆ ಸ್ವಲ್ಪ ವಿಚಿತ್ರವಾಗಿ, `ಕಂಗ್ಲಿಷ್’ ತರಹ ಕೇಳಿಸುತ್ತದೆ! ಆದರೆ, ಇದು ಕಾಲದ ಮಹಿಮೆ. ನಮ್ಮದು `Only Kannada ಅಲ್ಲ, Mainly Kannada’ ಎನ್ನುವ ನಂಬಿಕೆ. ಇದರಲ್ಲಿ ಇಂಗ್ಲೀಷಿನ ಪ್ರಭಾವ ಇದೆ, ನಿಜ. ಆದರೂ, ಇಂತಹ ಪ್ರಭಾವಗಳನ್ನು ಜೀರ್ಣಿಸಿಕೊಂಡು, ಕನ್ನಡದ ಕಸುವಿನೊಂದಿಗೆ ನಾವು ಹೆಜ್ಜೆ ಇಡಬೇಕು ಎಂದು ನಂಬಿರುವವರು ನಾವು. ಜೊತೆಗೆ, ಕನ್ನಡವೂ ಎಲ್ಲವನ್ನೂ ಆವಾಹಿಸಿಕೊಳ್ಳಬೇಕು, ಯಾವುದನ್ನೂ ವಿಸರ್ಜಿಸಬಾರದು- ಎನ್ನುವ ತಿಳಿವಳಿಕೆ `ಕನ್ನಡಿಸಂ’ನ ಹಿಂದಿದೆ. 

​#ಕನ್ನಡಿಸಂ

 ಚಿತ್ರವು ಏನನ್ನು ಪ್ರತಿನಿಧಿಸುತ್ತದೆ?

Kannadizm logo 2 _edited.png

ಕನ್ನಡಿಸಂ (Celebrating Kannadizm) ಎಂದರೆ ಈ ಚಿಹ್ನೆಯೊಂದಿಗಿರೋ ಈ ಪದಜೋಡಿ ತಿಳಿಸುತ್ತಿದೆ, ಕನ್ನಡತನವನ್ನ ಸಾರುವುದೇ, ಕನ್ನಡಿಗರ ಔದಾರ್ಯವನ್ನ ತೋರಿಸುವುದೇ, ಕನ್ನಡತನದ ಸಾರ್ವಭೌಮತ್ವ ವನ್ನ ಮೆರೆಸಯವುದೇ ನಮ್ಮ ''ಸೆಲೆಬ್ರೇಟಿಂಗ್ ಕನ್ನಡಿಜಮ್'' ಅನ್ನೋದರ ಒಳಾರ್ಥ; ಅಂದರೆ ಈ ಮೂಲಕ ನಾವು ಸಾರ್ವಕಾಲಿಕವಾಗಿ ಕನ್ನಡವನ್ನ ಆಚರಿಸುತ್ತಾ ಸಂಭ್ರಮಿಸುತ್ತೇವೆ. ಲೋಬೋ ಅನ್ನು ಬಿಡಿಸಿ ಪ್ರತ್ಯೇಕ ದೃಷ್ಟಿಕೋನದಿಂದ ನೋಡಿದಾಗ ಆಂಗ್ಲಪದದ I & ಕರ್ನಾಟಕದ ನಕ್ಷೆ ಎರಡೂ ಸೇರಿಕೊಂಡು ಮತ್ತೆ ಆಂಗ್ಲಪದದ k ರೀತಿಯಲ್ಲಿ ಗೋಚರಿಸುವುದರ ಪ್ರತೀಕವೇನೆಂದರೆ, ನಾನು (I) ಅಂದರೆ ಕನ್ನಡಿಗ, ಕನ್ನಡಿಗ ಅಂದರೆ ಕರ್ನಾಟಕ; ಎರಡೂ ಕೂಡಿಕೊಂಡಿರುವುದರ ಅರ್ಥ ನಾನೆಂದಿಗೂ ಕರುನಾಡಿನ ಶಾರೀರಿಕ ಭಾಗವೇ ಆಗಿರ್ತೀನಿ, ನನ್ನ ನಾಡಿಗೆ ನೋವಾದರೆ ನನಗೇ ನೋವಾದಂತೆ. ಚೆಲುವಾದ ಪಕ್ಷಿಲೋಕದ ವಿರಳತೆಯ ವಿಶಿಷ್ಟತೆಯ ಹಾಗೂ ವಾಸ್ತವದಲ್ಲಿ ಬೇರೆಲ್ಲೂ ಇಲ್ಲದ ಗಂಡಬೇರುಂಡ ಪಕ್ಷಿಯಂತೆಯೇ ಇಂತಹ ಇನ್ನೊಂದು ವಿರಳವಾದ ನಾಡಿರಲು ಸಾಧ್ಯವಿಲ್ಲ, ಸದಾಕಾಲಕೂ ಲಕ್ಷ್ಮೀ ಕಳೆಯ ಸಂಕೇತವಾಗಿ ಆನೆಯೊಂದು ಶುಭವನ್ನ ಸೂಚಿಸಿದರೆ, ಮತ್ತೊಂದು ಆನೆ ಮದಗಜವಾಗಿ ಯಾರಿಗೂ ತಲೆಬಾಗದೆ ನಡೆವ ಶೌರ್ಯದ ದ್ಯೋತಕ. ಚೆಲುವಿಗೇ(ಸೊಗಸಿಗೇ) ಕಳಸಪ್ರಾಯವಾದ ಗರಿಗಳ ಕಿರೀಟವಂತೂ ಮನಮೋಹಕತೆಯನ್ನ ಆಕರ್ಷಣೀಯತೆಯನ್ನ ಪ್ರಚುರಪಡಿಸುವಂತಿರುವುದೆಲ್ಲವನ್ನ ನೋಡಿದರೇ ಸಾಕು ಇಡೀ ಕನ್ನಡನಾಡನ್ನ ಹಿಡಿ ಯಲ್ಲಿ (ಅಂದರೆ ಸಮಷ್ಟಿಯನ್ನೇ ಮುಷ್ಟಿಯಲ್ಲಿ ತೋರ್ಪಡಿಸುವುದು ಎಂಬಂತೆ.) ವರ್ಣಿಸಿದಂತಾಗುತ್ತಿದೆ.

ಕನ್ನಡಿಸಂ ಅಂದರೆ ಏನು?

​About Kannadizm

ಕನ್ನಡಿಸಂ

`ಕನ್ನಡಿಸಂ’ ಅಂದರೆ ಸ್ವಲ್ಪ ವಿಚಿತ್ರವಾಗಿ, `ಕಂಗ್ಲಿಷ್’ ತರಹ ಕೇಳಿಸುತ್ತದೆ! ಆದರೆ, ಇದು ಕಾಲದ ಮಹಿಮೆ. ನಮ್ಮದು `Only Kannada ಅಲ್ಲ, Mailnly Kannada’ ಎನ್ನುವ ನಂಬಿಕೆ. ಇದರಲ್ಲಿ ಇಂಗ್ಲೀಷಿನ ಪ್ರಭಾವ ಇದೆ, ನಿಜ. ಆದರೂ, ಇಂತಹ ಪ್ರಭಾವಗಳನ್ನು ಜೀರ್ಣಿಸಿಕೊಂಡು, ಕನ್ನಡದ ಕಸುವಿನೊಂದಿಗೆ ನಾವು ಹೆಜ್ಜೆ ಇಡಬೇಕು ಎಂದು ನಂಬಿರುವವರು ನಾವು. ಜೊತೆಗೆ, ಕನ್ನಡವೂ ಎಲ್ಲವನ್ನೂ ಆವಾಹಿಸಿಕೊಳ್ಳಬೇಕು, ಯಾವುದನ್ನೂ ವಿಸರ್ಜಿಸಬಾರದು- ಎನ್ನುವ ತಿಳಿವಳಿಕೆ `ಕನ್ನಡಿಸಂ’ನ ಹಿಂದಿದೆ. 
ಕನ್ನಡವಿಲ್ಲದೆ ಕನ್ನಡಿಗರ ಬದುಕಿಲ್ಲ, ಕನ್ನಡಿಗರಿಗೆ ಅಸ್ತಿತ್ವವಿಲ್ಲ, ನಮ್ಮ ಬದುಕಿನ ಚೆಲುವಿಲ್ಲ- ಇಂತಹ ಒಂದು ಸೂತ್ರ `ಕನ್ನಡಿಸಂ’ನ ತತ್ತ್ವದ ಹಿಂದಿದೆ. ನಾವೆಲ್ಲರೂ ಕನ್ನಡವನ್ನು ನಮ್ಮ ಬದುಕಿನ ಹೆಜ್ಜೆಹೆಜ್ಜೆಯಲ್ಲೂ ಸಾಧ್ಯವಾದಷ್ಟೂ ಅನುಸರಿಸಬೇಕು, ಕನ್ನಡದ ಮೂಲಕವೇ ಜಗತ್ತನ್ನು ನೋಡಬೇಕು, ಚಿಂತನೆಯನ್ನು ಕಟ್ಟಿಕೊಳ್ಳಬೇಕು, ಪಕ್ಕದಲ್ಲೋ ಎದುರಿನಲ್ಲೋ ಇರುವ ಕನ್ನಡಿಗರನ್ನು ಆತುಕೊಳ್ಳಬೇಕು, ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಮಾಡಬೇಕು, ಕನ್ನಡದಲ್ಲೇ ವ್ಯವಹರಿಸಬೇಕು…….. ಒಟ್ಟಿನಲ್ಲಿ ಕನ್ನಡವು ನಮ್ಮ ಚೈತನ್ಯದ ಕೇಂದ್ರವಾಗಬೇಕು! ಇದೇ `ಕನ್ನಡಿಸಂ’ನ ಸಾರ!
ನಮ್ಮದು ಭಾಷಿಕ ಒಕ್ಕೂಟ ವ್ಯವಸ್ಥೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂದಮೇಲೆ, ನಮ್ಮ ಭಾಷೆಯೇ ನಮಗೆ ಆಧಾರವಲ್ಲವೇ? ಆದರೂ ಪಕ್ಕದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾಗಳಲ್ಲಿ ಅಲ್ಲಲ್ಲಿಯ ಭಾಷೆಗಳ ಮೇಲೆ ಅಲ್ಲಿಯ ಜನರಿಗಿರುವಷ್ಟು ಪ್ರೀತಿ-ಅಭಿಮಾನಗಳು ಕನ್ನಡಿಗಿರಗಿಲ್ಲ ಎನ್ನುವ ಬೇಸರ ಮೊದಲಿನಿಂದಲೂ ಇದೆ. ಕರ್ನಾಟಕ `ಕಾಸ್ಮೋಪಾಲಿಟನ್ ಸಂಸ್ಕೃತಿ’ಗೆ ತನ್ನನ್ನು ತೆರೆದುಕೊಂಡಿದ್ದು, ಕನ್ನಡ-ಕನ್ನಡಿಗ-ಕರ್ನಾಟಕದ ಹಿತಗಳನ್ನು ಅಂಚಿಗೆ ಸರಿಸಿರುವುದು ಇದಕ್ಕೆ ಕಾರಣವೆನಿಸುತ್ತದೆ. ಈ ಕಾಸ್ಮೋಪಾಲಿಟನ್ ಸಂಸ್ಕೃತಿ ಎನ್ನುವುದು ನಮ್ಮನ್ನು ಆಳುವ ಸರಕಾರಗಳ ಆರ್ಥಿಕ ಮಂತ್ರ! ಇದನ್ನು ಹಿಮ್ಮೆಟ್ಟಿಸಬೇಕೆಂದರೆ, ಅಥವಾ ಇದು ನಮ್ಮ ಭಾಷೆ-ಸಂಸ್ಕೃತಿಗಳಲ್ಲಿ ಒಂದಾಗಿ ಸೇರಿಕೊಳ್ಳಬೇಕೆಂದರೆ, `ಕನ್ನಡಿಸಂ’ ಎನ್ನುವ ಪರಿಷ್ಕೃತ ಮಂತ್ರ ಕಾಲದ ಜರೂರು.
ಏಕೆಂದರೆ, ಪಕ್ಕದ ತಮಿಳುನಾಡು-ಕೇರಳಗಳು ತಮ್ಮ ತಮಿಳು-ಮಲಯಾಳಂ ಭಾಷೆಗಳನ್ನಾಗಲಿ, ಮಹಾರಾಷ್ಟ್ರ-ಆಂಧ್ರಪ್ರದೇಶಗಳು ತಮ್ಮ ನೆಲದ ನುಡಿಗಳಾದ ಮರಾಠಿ-ತೆಲುಗುಗಳನ್ನಾಗಲಿ ಬಿಟ್ಟುಕೊಟ್ಟಿಲ್ಲ. ಕರ್ನಾಟಕದ ವಿಸ್ತೀರ್ಣಕ್ಕೆ ಹೋಲಿಸಿದರೆ ಅಂಗೈ ಅಗಲವಿರುವ ಗೋವಾದಲ್ಲಿ ಅಲ್ಲಿಯ ನುಡಿಯಾದ ಕೊಂಕಣಿಗೆ ಸರಕಾರಗಳನ್ನೇ ಬೀಳಿಸುವಷ್ಟು, ಸರಕಾರಗಳು ಕೊಂಕಣಿಯ ಪರವಾಗಿ ತಮ್ಮ ನೀತಿ-ನಿಯಮಾವಳಿಗಳನ್ನು ಬದಲಿಸಿಕೊಳ್ಳುವಂತೆ ಮಾಡಬಲ್ಲಷ್ಟು ಶಕ್ತಿ ಇದೆ! 
ಮಧ್ಯಪ್ರಾಚ್ಯದಲ್ಲಿರುವ ಪುಟ್ಟ ದೇಶ ಇಸ್ರೇಲ್ ತನ್ನ ಹೀಬ್ರೂ ಭಾಷೆಗೆ ಮರುಜೀವ ನೀಡಿದೆ; ಉದಾರೀಕರಣಕ್ಕೆ ತೆರೆದುಕೊಂಡು ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ದೊಡ್ಡ ಚೀನಾ ತನ್ನ ಮ್ಯಾಂಡರಿನ್ ಭಾಷೆಯನ್ನು ಬಿಟ್ಟುಕೊಟ್ಟಿಲ್ಲ; ಇಂಗ್ಲೆಂಡಿಗೆ ಅಂಟಿಕೊಂಡಿರುವ ಫ್ರಾನ್ಸ್ ತನ್ನ ಫ್ರೆಂಚ್ ಭಾಷೆಯನ್ನು ಮರೆತಿಲ್ಲ; ಪೂರ್ವದ ಅಂಚಿನಲ್ಲಿ ಇರುವ ಜಪಾನ್ ತನ್ನ ಭಾಷೆಯನ್ನು ವಿಸರ್ಜಿಸಿಲ್ಲ; ಯೂರೋಪಿನಲ್ಲಿರುವ ಜರ್ಮನಿಯು ತನ್ನಲ್ಲಿಗೆ ಕಲಿಯಲು, ದುಡಿಯಲು, ನೆಲೆಸಲು ಬರುವ ಯಾರೇ ಆದರೂ ಆರು ತಿಂಗಳಲ್ಲಿ ಜರ್ಮನ್ ಭಾಷೆಯನ್ನು ಕಲಿಯುವುದು ಕಡ್ಡಾಯ ಎನ್ನುತ್ತದೆ. ಇನ್ನು ಮಧ್ಯಪ್ರಾಚ್ಯದ ದೇಶಗಳಿಗೆ ಹೋದರೆ ಅರೇಬಿಕ್ ಭಾಷೆಯನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಕರ್ನಾಟಕದ ಸ್ಥಿತಿಗತಿ ಈ ವಿಚಾರದಲ್ಲಿ ಹೇಗಿದೆ? ಇಲ್ಲಿ ಕನ್ನಡವೊಂದನ್ನು ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡುತ್ತಿದ್ದರೆ ಅವರಿಗೆ ಸರಕಾರವೇ ರತ್ನಗಂಬಳಿ ಹಾಕುತ್ತದೆ; ಉದ್ಯಮಲೋಕದಲ್ಲಿ ಅಂಥವರಿಗೆ ರಾಜಾತಿಥ್ಯ ಸಿಕ್ಕುತ್ತದೆ; ಜನಸಾಮಾನ್ಯರು ಅಂಥವರೊಂದಿಗೆ ಅವರ ಭಾಷೆಯಲ್ಲೇ ಸಲೀಸಾಗಿ ಮಾತನಾಡಲು ಶುರು ಮಾಡಿಬಿಡುತ್ತಾರೆ. 
ಏಳು ಕೋಟಿ ಕನ್ನಡಿಗರಿಗೇಕೋ ಇಂಗ್ಲೀಷು-ಹಿಂದಿಗಳ ಕಡೆಗೆ ಹೋಗುತ್ತಿದ್ದಾರೆ. ಇದು ಕಳವಳದ ಸಂಗತಿ. ಈ ಮಾತು ಕೇವಲ ಆತಂಕದ್ದಲ್ಲ; ಬದಲಿಗೆ ವಾಸ್ತವ. ನಮ್ಮ ಶಿಕ್ಷಣ ವ್ಯವಸ್ಥೆ, ಅಧಿಕಾರಶಾಹಿ, ರಾಜ್ಯ-ಕೇಂದ್ರಗಳ ಸಂಬಂಧ, ಖಾಸಗಿ ವಲಯದ ಉದ್ಯೋಗಕ್ಷೇತ್ರ, ನಮ್ಮ ನೇತಾರರು, ಯುವಜನರು, ಗೃಹಿಣಿಯರು, ವ್ಯಾಪಾರಿಗಳು, ಉದ್ಯಮಿಗಳು, ತಂತ್ರಜ್ಞರು, ವಿಜ್ಞಾನಿಗಳು, ಕ್ರಿಕೆಟ್ ಅಭಿಮಾನಿಗಳು, ಶಿಕ್ಷಕ-ಶಿಕ್ಷಕಿಯರು, ಚಿಕ್ಕಚಿಕ್ಕ ಮಕ್ಕಳು, ವಯೋವೃದ್ಧ ನಿವೃತ್ತರು- ಹೀಗೆ ಯಾರನ್ನು ನೋಡಿದರೂ ಇದು ಢಾಳಾಗಿ ಕಾಣುತ್ತದೆ. ಹಾಗೆಂದು, ಸುಮ್ಮನೆ ಇರಲಾದೀತೇ? ಇಲ್ಲ, ಹಾಗಾದರೆ, ನಾವೇನು ಮಾಡಬೇಕು? `ಕನ್ನಡಿಸಂ’ ಅನ್ನು ಬೆಳೆಸಬೇಕು! ಕನ್ನಡದ ಬಗ್ಗೆ ಬರೀ ರಮ್ಯವಾಗಿ ಮಾತನಾಡುವುದನ್ನು ಬಿಟ್ಟು ಕನ್ನಡವು ಬದುಕಿನ ನಿತ್ಯ ವ್ಯವಹಾರಗಳಿಂದ ಹಿಡಿದು ಭವಿಷ್ಯದ ಹೆದ್ದಾರಿಯಾಗುವಂತೆ ಮಾಡಬೇಕು!! 
ಬನ್ನಿ, ಹಾಗಾದರೆ, `ಕನ್ನಡಿಸಂ’ ಸಂಸ್ಕೃತಿಯನ್ನು ಬೆಳೆಸುವ ದಾರಿಗಳನ್ನು ನೋಡೋಣ!

•    ಮನೆಯಲ್ಲಿ ಪರಸ್ಪರ ನಾವೆಲ್ಲರೂ ಕನ್ನಡದಲ್ಲೇ ಮಾತನಾಡೋಣ
•    ಮುಖ್ಯವಾಗಿ ತಂದೆ-ತಾಯಂದಿರು ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಬೇಕು.
•    ಮನೆಗೆ ಯಾರಾದರೂ ನೆಂಟರಿಷ್ಟರು ಬಂದರೆ, ಅವರೊಂದಿಗೂ ಅಭಿಮಾನದಿಂದ ಕನ್ನಡದಲ್ಲೇ ಮಾತನಾಡೋಣ.
•    ಬೀದಿಯಲ್ಲಿ ಯಾರಾದರೂ ಏನಾದರೂ ಕೇಳಿದರೆ, ಮೊದಲು ಅವರೊಂದಿಗೆ ಕನ್ನಡದಲ್ಲೇ ಮಾತಿಗಿಳಿಯೋಣ.
•    ನಮ್ಮ ದಿನನಿತ್ಯದ ವ್ಯವಹಾರಗಳು ಕನ್ನಡದಲ್ಲೇ ಇರಲಿ (ಉದಾ: ಅಂಚೆ ಕಚೇರಿ, ಬ್ಯಾಂಕು, ಬಸ್ಸು/ರೈಲು ನಿಲ್ದಾಣ/ಅಂಗಡಿ-ಮುಂಗಟ್ಟುಗಳಲ್ಲಿ)
•    ಒಂದಾದರೂ ಕನ್ನಡ ಪತ್ರಿಕೆ/ವಾರಪತ್ರಿಕೆ/ಮಾಸಿಕ/ನಿಯತಕಾಲಿಕಗಳನ್ನು ತಪ್ಪದೆ ಓದೋಣ
•    ಮನೆಯ ಗೋಡೆಯ ಮೇಲೆ ಎದ್ದು ಕಾಣುವಂತೆ ಕನ್ನಡ ವರ್ಣಮಾಲೆ/ಕಾಗುಣಿತಗಳ ಚಿತ್ರಪಟವಿರಲಿ. ಇದರಿಂದಾಗಿ, ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಕನ್ನಡದ ಅಕ್ಷರಗಳು ಪರಿಚಿತವಾಗುತ್ತವೆ.
•    ಮನೆಯಲ್ಲಿ ಬಳಸುವ ಅಡುಗೆ ಪದಾರ್ಥಗಳಿಗೆ ಕನ್ನಡದಲ್ಲೇ ಒಳ್ಳೆಯ, ಅರ್ಥವತ್ತಾದ ಹೆಸರುಗಳಿವೆ. ಆದ್ದರಿಂದ ಅವುಗಳನ್ನೇ ಬಳಸೋಣ (ಉದಾ: ದೊಣ್ಣೆಮೆಣಸಿನಕಾಯಿ (ಕ್ಯಾಪ್ಸಿಕಂ), ಹಸಿಮೆಣಸಿನಕಾಯಿ (ಗ್ರೀನ್ ಚಿಲ್ಲೀಸ್), ಮೊಸರು (ಕರ್ಡ್), ಹಾಲು (ಮಿಲ್ಕ್), ಗಿಣ್ಣು (ಚೀಸ್), ಬೆಣ್ಣೆ (ಬಟರ್), ಉಪ್ಪು (ಸಾಲ್ಟ್), ನೆಲಗಡಲೆ (ಗ್ರೌಂಡ್ ನಟ್), ರವೆ (ರವಾ), ವಡೆ (ವಡಾ), ಉಪ್ಪಿಟ್ಟು (ಉಪ್ಮಾ), ಮೊಸರನ್ನ (ಕರ್ಡ್ ರೈಸ್), ನೀರು (ವಾಟರ್) ಎಣ್ಣೆ (ಆಯಿಲ್), ಅಕ್ಕಿ (ರೈಸ್), ಸಕ್ಕರೆ (ಶುಗರ್), ಬೆಲ್ಲ (ಜಾಗರಿ) ಮುಂತಾದವುಗಳನ್ನು ನೋಡಿ). 
•    ಕನ್ನಡದಲ್ಲಿ ಇರುವಂತಹ ಸಮೃದ್ಧವಾದ ಸಂಬಂಧವಾಚಕಗಳು ಖಂಡಿತವಾಗಿಯೂ ಇಂಗ್ಲೀಷನಲ್ಲಿ ಇಲ್ಲ. ಆದರೂ ನಮ್ಮ ತಾಯಂದಿರಿಗೆ ತಮ್ಮ ಮಕ್ಕಳು ಯಾರನ್ನೇ ಆದರೂ `ಆಂಟೀ/ಅಂಕಲ್’ ಎಂದು ಉದ್ಗರಿಸಿದರೆ ಬಹಳ ಖುಷಿ! ಆದರೆ, ಇದೆಲ್ಲ ಮುಂದೊಂದು ದಿನ ನಮ್ಮ ಮಕ್ಕಳನ್ನು ಅತಂತ್ರರನ್ನಾಗಿ ಮಾಡುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಮನೆಗೆ ಹಿರಿಯರು/ಕಿರಿಯರು, ನೆಂಟರಿಷ್ಟರು ಬಂದಾಗ ಮಕ್ಕಳಿಗೆ ಅವರನ್ನೆಲ್ಲ ಕನ್ನಡದ ಸಂಬಂಧವಾಚಕಗಳಿಂದಲೇ ಸಂಬೋಧಿಸಿ, ಮಾತನಾಡಿಸುವುದನ್ನು ಅಭ್ಯಾಸ ಮಾಡಿಸಿ (ಉದಾ: ಅಪ್ಪ/ಅಮ್ಮ, ಚಿಕ್ಕಪ್ಪ/ಚಿಕ್ಕಮ್ಮ, ದೊಡ್ಡಪ್ಪ/ದೊಡ್ಡಮ್ಮ, ಅಣ್ಣ/ಅಕ್ಕ, ಅತ್ತೆ/ಮಾವ, ಅಜ್ಜ/ಅಜ್ಜಿ, ಅಳಿಯ, ಸೊಸೆ, ಮೈದುನ, ಭಾವ, ತಾತ, ಸೋದರಳಿಯ, ಸೋದರ ಸೊಸೆ ಇತ್ಯಾದಿಗಳು)
•    ಕನ್ನಡಿಗರು ಪುಸ್ತಕ ಓದುವ ಅಭ್ಯಾಸವನ್ನು ಹಿಂದಿನಿಂದಲೂ ಅಷ್ಟಾಗಿ ಬೆಳೆಸಿಕೊಂಡಿಲ್ಲ. ಆದ್ದರಿಂದ ಜನಪ್ರಿಯ ಮತ್ತು ಅಭಿಜಾತ ಸಾಹಿತ್ಯ ಕೃತಿಗಳನ್ನು ಓದುವುದನ್ನು ಮನೆಮನೆಗಳಲ್ಲಿ ಬೆಳೆಸಿಕೊಳ್ಳಬೇಕು. (ಉದಾ: ತಿಂಗಳಿಗೆ ಒಂದಾದರೂ ಒಳ್ಳೆಯ ಕನ್ನಡ ಪುಸ್ತಕವನ್ನು ಗ್ರಂಥಾಲಯದಿಂದ ತಂದೋ, ಅಂಗಡಿಯಲ್ಲಿ/ಆನ್-ಲೈನಿನಲ್ಲಿ ಖರೀದಿಸಿಯೋ ಓದಬೇಕು).
•    ಇದು ಖಾಸಗಿ ಉದ್ದಿಮೆಗಳ ಕಾಲ. ಅಲ್ಲೆಲ್ಲ ಈಗ ಇಂಗ್ಲೀಷು-ಹಿಂದಿಗಳದೇ ಕಾರುಬಾರು. ಇಂತಹ ಕಡೆಗಳಲ್ಲಿ ಉದ್ಯೋಗಕ್ಕೆಂದು ಹೋಗುವ ಕನ್ನಡಿಗರು ಅಭಿಮಾನದಿಂದ ಕನ್ನಡದಲ್ಲೇ ಮಾತನಾಡಬೇಕು. ಜತೆಗೆ, ತಾವು ಶಿಫಾರಸು ಮಾಡುವ ಸಂದರ್ಭ ಬಂದರೆ, ನೇಮಕಾತಿಯ ಅಧಿಕಾರ ಹೊಂದಿದ್ದರೆ ಆದಷ್ಟೂ ಕನ್ನಡಿಗರಿಗೇ ಸಹಾಯ ಮಾಡಬೇಕು.
•    ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಬೆಳೆಸಬೇಕು ಎನ್ನುವುದು ಈಗ ಒಂದು ಜನಪ್ರಿಯ ಸ್ಲೋಗನ್! ಆದರೆ, ನಮ್ಮ ಕನ್ನಡವನ್ನು ಮೊದಲು ಜ್ಞಾನದ ಭಾಷೆಯಾಗಿಸಬೇಕು. ಇದು ಸಾಧ್ಯವಾದರೆ, ಸಹಜವಾಗಿಯೇ ನಮ್ಮ ಭಾಷೆಯು ಅನ್ನದ ಭಾಷೆಯಾಗುತ್ತದೆ. ಹೀಗಾಗಿ, ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಮನೋವಿಜ್ಞಾನ, ಕ್ರಿಮಿನಾಲಜಿ, ಅರ್ಥಶಾಸ್ತ್ರ, ಭಾಷಾಶಾಸ್ತ್ರ, ಸಮಾಜಶಾಸ್ತ್ರ, ವಿದೇಶಾಂಗ ವ್ಯವಹಾರ, ರೋಬೋಟಿಕ್ಸ್, ರಕ್ಷಣಾ ನೀತಿ, ಬ್ಯಾಂಕಿಂಗ್, ಸಿನಿಮಾ, ಉದ್ಯಮಶೀಲತೆ, ಬಾಹ್ಯಾಕಾಶ ವಿಜ್ಞಾನ, ಸಾಗರವಿಜ್ಞಾನ ಕುರಿತ ಪುಸ್ತಕಗಳೆಲ್ಲವನ್ನೂ ಕನ್ನಡದಲ್ಲಿ ಹುಲುಸಾಗಿ ಬೆಳೆಸಲು ಇಂಬು ಕೊಡಬೇಕು. 
•    ನಮ್ಮಲ್ಲಿ ಸಂಗೀತ ಕಛೇರಿ, ಭರತನಾಟ್ಯ ಪ್ರದರ್ಶನ ಇತ್ಯಾದಿಗಳೆಲ್ಲ ಬಲುಜೋರಾಗಿ ನಡೆಯುತ್ತವೆ. ಇವೆಲ್ಲವೂ ನಮ್ಮ ನೆಲದ ಕಲೆಗಳೇ ಆಗಿವೆ. ಆದರೆ, ಇಲ್ಲೆಲ್ಲ ನಿರೂಪಣೆ ಇಂಗ್ಲೀಷಿನಲ್ಲೇ ನಡೆಯುತ್ತದೆ. ಇಂತಹ ಕಡೆಗಳಲ್ಲಿ ಕಾರ್ಯಕ್ರಮವೆಲ್ಲ ಕನ್ನಡದ ಕಂಪಿನೊಂದಿಗೆ ನಡೆಯುವಂತೆ ಮಾಡಬೇಕು.
•    `ಕನ್ನಡಿಸಂ’ನ ಕಳಕಳಿಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಹತ್ತನೇ ತರಗತಿಯವರೆಗಾದರೂ ಶಿಕ್ಷಣ ಸಿಗುವಂತೆ ಆಗಬೇಕೆನ್ನುವುದು ಮುಖ್ಯವಾಗಿದೆ. ಇದಕ್ಕಾಗಿ ಅಗತ್ಯವಾದ ಒಂದು ಚಿಂತನೆಯ ಚೌಕಟ್ಟನ್ನು ನಾವೆಲ್ಲರೂ ಸೇರಿ ಮುನ್ನೆಲೆಗೆ ತರಬೇಕು. ಇದರಲ್ಲಿ ಶಿಕ್ಷಣದ ರಾಷ್ಟ್ರೀಕರಣ, ಏಕರೂಪದ ಶಿಕ್ಷಣ, ಸಂವಿಧಾನ ತಿದ್ದುಪಡಿ, ಸರಕಾರಗಳ ಮೇಲೆ ಒತ್ತಡ- ಮುಂತಾದ ಉಪಕ್ರಮಗಳಿಗೆ ಸಂಬಂಧಿಸಿದಂತೆ ಒಂದು ಒತ್ತಡವನ್ನು ನಾವು ಸೃಷ್ಟಿಸಬೇಕು. 
•    ಜೊತೆಗೆ ಬ್ಯಾಂಕು, ಕೋರ್ಟು, ಕಂಪನಿ ಇತ್ಯಾದಿಗಳಲ್ಲಿ ಕನ್ನಡವನ್ನೇ ಅಳವಡಿಸಿಕೊಳ್ಳುವಂತೆ ಮಾಡಬೇಕಾದ್ದು ಕೂಡ `ಕನ್ನಡಿಸಂ’ನ ಭಾಗವೇ ಆಗಿದೆ.

Contact

ಪಕ್ಕದ ತಮಿಳುನಾಡು-ಕೇರಳಗಳು ತಮ್ಮ ತಮಿಳು-ಮಲಯಾಳಂ ಭಾಷೆಗಳನ್ನಾಗಲಿ, ಮಹಾರಾಷ್ಟ್ರ-ಆಂಧ್ರಪ್ರದೇಶಗಳು ತಮ್ಮ ನೆಲದ ನುಡಿಗಳಾದ ಮರಾಠಿ-ತೆಲುಗುಗಳನ್ನಾಗಲಿ ಬಿಟ್ಟುಕೊಟ್ಟಿಲ್ಲ. ಕರ್ನಾಟಕದ ವಿಸ್ತೀರ್ಣಕ್ಕೆ ಹೋಲಿಸಿದರೆ ಅಂಗೈ ಅಗಲವಿರುವ ಗೋವಾದಲ್ಲಿ ಅಲ್ಲಿಯ ನುಡಿಯಾದ ಕೊಂಕಣಿಗೆ ಸರಕಾರಗಳನ್ನೇ ಬೀಳಿಸುವಷ್ಟು, ಸರಕಾರಗಳು ಕೊಂಕಣಿಯ ಪರವಾಗಿ ತಮ್ಮ ನೀತಿ-ನಿಯಮಾವಳಿಗಳನ್ನು ಬದಲಿಸಿಕೊಳ್ಳುವಂತೆ ಮಾಡಬಲ್ಲಷ್ಟು ಶಕ್ತಿ ಇದೆ! ಮಧ್ಯಪ್ರಾಚ್ಯದಲ್ಲಿರುವ ಪುಟ್ಟ ದೇಶ ಇಸ್ರೇಲ್ ತನ್ನ ಹೀಬ್ರೂ ಭಾಷೆಗೆ ಮರುಜೀವ ನೀಡಿದೆ; ಉದಾರೀಕರಣಕ್ಕೆ ತೆರೆದುಕೊಂಡು ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ದೊಡ್ಡ ಚೀನಾ ತನ್ನ ಮ್ಯಾಂಡರಿನ್ ಭಾಷೆಯನ್ನು ಬಿಟ್ಟುಕೊಟ್ಟಿಲ್ಲ; ಇಂಗ್ಲೆಂಡಿಗೆ ಅಂಟಿಕೊಂಡಿರುವ ಫ್ರಾನ್ಸ್ ತನ್ನ ಫ್ರೆಂಚ್ ಭಾಷೆಯನ್ನು ಮರೆತಿಲ್ಲ; ಪೂರ್ವದ ಅಂಚಿನಲ್ಲಿ ಇರುವ ಜಪಾನ್ ತನ್ನ ಭಾಷೆಯನ್ನು ವಿಸರ್ಜಿಸಿಲ್ಲ; ಯೂರೋಪಿನಲ್ಲಿರುವ ಜರ್ಮನಿಯು ತನ್ನಲ್ಲಿಗೆ ಕಲಿಯಲು, ದುಡಿಯಲು, ನೆಲೆಸಲು ಬರುವ ಯಾರೇ ಆದರೂ ಆರು ತಿಂಗಳಲ್ಲಿ ಜರ್ಮನ್ ಭಾಷೆಯನ್ನು ಕಲಿಯುವುದು ಕಡ್ಡಾಯ ಎನ್ನುತ್ತದೆ. ಇನ್ನು ಮಧ್ಯಪ್ರಾಚ್ಯದ ದೇಶಗಳಿಗೆ ಹೋದರೆ ಅರೇಬಿಕ್ ಭಾಷೆಯನ್ನು ಒಪ್ಪಿಕೊಳ್ಳಲೇಬೇಕು.ಆದರೆ, ಕರ್ನಾಟಕದ ಸ್ಥಿತಿಗತಿ ಈ ವಿಚಾರದಲ್ಲಿ ಹೇಗಿದೆ? ಇಲ್ಲಿ ಕನ್ನಡವೊಂದನ್ನು ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡುತ್ತಿದ್ದರೆ  ಉದ್ಯಮಲೋಕದಲ್ಲಿ ಅಂಥವರಿಗೆ ರಾಜಾತಿಥ್ಯ ಸಿಕ್ಕುತ್ತದೆ; ಜನಸಾಮಾನ್ಯರು ಅಂಥವರೊಂದಿಗೆ ಅವರ ಭಾಷೆಯಲ್ಲೇ ಸಲೀಸಾಗಿ ಮಾತನಾಡಲು ಶುರು ಮಾಡಿಬಿಡುತ್ತಾರೆ. 

ಏಳು ಕೋಟಿ ಕನ್ನಡಿಗರಿಗೇಕೋ ಇಂಗ್ಲೀಷು-ಹಿಂದಿಗಳ ಕಡೆಗೆ ಹೋಗುತ್ತಿದ್ದಾರೆ. ಇದು ಕಳವಳದ ಸಂಗತಿ. ಈ ಮಾತು ಕೇವಲ ಆತಂಕದ್ದಲ್ಲ; ಬದಲಿಗೆ ವಾಸ್ತವ. ನಮ್ಮ ಶಿಕ್ಷಣ ವ್ಯವಸ್ಥೆ, ಅಧಿಕಾರಶಾಹಿ, ರಾಜ್ಯ-ಕೇಂದ್ರಗಳ ಸಂಬಂಧ, ಖಾಸಗಿ ವಲಯದ ಉದ್ಯೋಗಕ್ಷೇತ್ರ, ನಮ್ಮ ನೇತಾರರು, ಯುವಜನರು, ಗೃಹಿಣಿಯರು, ವ್ಯಾಪಾರಿಗಳು, ಉದ್ಯಮಿಗಳು, ತಂತ್ರಜ್ಞರು, ವಿಜ್ಞಾನಿಗಳು, ಕ್ರಿಕೆಟ್ ಅಭಿಮಾನಿಗಳು, ಶಿಕ್ಷಕ-ಶಿಕ್ಷಕಿಯರು, ಚಿಕ್ಕಚಿಕ್ಕ ಮಕ್ಕಳು, ವಯೋವೃದ್ಧ ನಿವೃತ್ತರು- ಹೀಗೆ ಯಾರನ್ನು ನೋಡಿದರೂ ಇದು ಢಾಳಾಗಿ ಕಾಣುತ್ತದೆ. ಹಾಗೆಂದು, ಸುಮ್ಮನೆ ಇರಲಾದೀತೇ? ಇಲ್ಲ, ಹಾಗಾದರೆ, ನಾವೇನು ಮಾಡಬೇಕು? `ಕನ್ನಡಿಸಂ’ ಅನ್ನು ಬೆಳೆಸಬೇಕು! ಕನ್ನಡದ ಬಗ್ಗೆ ಬರೀ ರಮ್ಯವಾಗಿ ಮಾತನಾಡುವುದನ್ನು ಬಿಟ್ಟು ಕನ್ನಡವು ಬದುಕಿನ ನಿತ್ಯ ವ್ಯವಹಾರಗಳಿಂದ ಹಿಡಿದು ಭವಿಷ್ಯದ ಹೆದ್ದಾರಿಯಾಗುವಂತೆ ಮಾಡಬೇಕು!! ಬನ್ನಿ, ಹಾಗಾದರೆ, `ಕನ್ನಡಿಸಂ’ ಸಂಸ್ಕೃತಿಯನ್ನು ಬೆಳೆಸುವ ದಾರಿಗಳನ್ನು ನೋಡೋಣ!

bottom of page